ವರದಿ:ರಾಕೇಶ ಮೈಗೂರ
ಅಥಣಿ: ಪಟ್ಟಣದ ಸದಾಶಿವ ನಗರದಲ್ಲಿ ಇರುವ ವ್ಯಾಪಾರಿ ಮಳಿಗೆಗಳ ಉದ್ಘಾಟನೆಯನ್ನು ಬಿಜೆಪಿ ಯುವಧುರೀಣ ಚಿದಾನಂದ ಸವದಿ ಉದ್ಘಾಟಿಸಿದರು. ಅಥಣಿ ತಾಲೂಕಿನ ಯುವ ಉದ್ಯಮಿ
ಪ್ರಕಾಶ ಹೆಗ್ಗಣ್ಣವರ ಅವರ ನಿವೇಶನಗಳಲ್ಲಿ ಸ್ಥಾಪಿಸಿದ ಖಾಸಗಿ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ ಚಿದಾನಂದ ಸವದಿ ಪ್ರಕಾಶ ಹೆಗ್ಗಣ್ಣವರ ಅವರು ಸಮಾಜ ಸೇವೆಯಲ್ಲಿ ಗುರುತಿಸಿಕೊಳ್ಳುವ ಮೂಲಕ ರಿಯಲ್ ಎಸ್ಟೇಟ್ ವ್ಯವಹಾರಲ್ಲಿಯೂ ತಮ್ಮದೆ ಆದ ಛಾಪು ಮೂಡಿಸುತ್ತಿದ್ದು ಸದ್ಯ ಸುಮಾರು ಇಪ್ಪತ್ತಕ್ಕೂ ಅಧಿಕ ಮಳಿಗೆಗಳನ್ನು ಸ್ಥಾಪಿಸಿ ಬಡ ಮತ್ತು ಮಧ್ಯಮವರ್ಗದ ಜನರ ವ್ಯಾಪಾರ ವಹಿವಾಟಿಗೆ ಕಡಿಮೆ ಡೆಪಾಜಿಟ್ ಮತ್ತು ಕಡಿಮೆ ಬಾಡಿಗೆ ದರದಲ್ಲಿ ಮಳಿಗೆಗಳನ್ನು ನೀಡುವ ಮೂಲಕ ಸ್ವ ಉದ್ಯೋಗಕ್ಕೆ ಪರೋಕ್ಷವಾಗಿ ಪ್ರೋತ್ಸಾಹ ನೀಡುತ್ತಿದ್ದಾರೆ ಅವರಿಗೆ ದೇವರು ಇನ್ನಷ್ಟು ಸಮಾಜಸೇವೆ ಮಾಡು ಶಕ್ತಿಯ ಜೊತೆಗೆ ಆಯುಶ್ ಆರೋಗ್ಯ ನೀಡಲಿ ಎಂದರು.

ಈ ವೇಳೆ ಮಾಜಿ ಪುರಸಭೆ ಅದ್ಯಕ್ಷ ದಿಲೀಪ ಲೋಣಾರೆ, ಪುರಸಭೆ ಸದಸ್ಯ ಕಲ್ಲೇಶ ಮಡ್ಡಿ, ಮಹಾತೇಶ ಠಕ್ಕನ್ನವರ, ಮಹಾತೇಶ ಬಾಡಗಿ, ಮಂಜು ಹೋಳಿಕಟ್ಟಿ, ಸಂಗಪ್ಪಾ ಮಾಯಾನಟ್ಟಿ, ರವಿ ಟಂಗೊಳ್ಳಿ, ಮಾತೇಶ ಮುಳಟ್ಟಿ, ಚನ್ನಬಸು ಹುಲಗಬಾಳ, ಶಂಕರ ಹಿರೇಮನಿ, ಸಂಜು ಕುರ್ಣಿ, ಸುಭಾಷ್ ಐಹೊಳೆ, ರಾಹುಲ ನಾಯಿಕ, ಮತ್ತಪ್ಪಾ ಜಮಖಂಡಿ, ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು.