ವರದಿ:ಸಚಿನ ಕಾಂಬ್ಳೆ. ಕಾಗವಾಡ
ಕಾಗವಾಡ :ಮತಕ್ಷೇತ್ರದಲ್ಲಿ ಲಕ್ಷಾಂತರ ರೈತರ ಜೀವನಾಡಿ ಆಗಿರುವ ಐನಾಪುರ್ ಏತ ನೀರಾವರಿ ಯೋಜನೆಯ ಕೆನಾಲ್ ನೀರು ಬಸಿದು ಹೋಗುತ್ತಿದ್ದು ಈ ಕಾಲುವೆ ದುರಸ್ತಿಗೊಳಿಸಲು ಎಂಟು ಕೋಟಿ ರೂಪಾಯಿ ಅನುದಾನ ಮಂಜೂರು ಗೊಳಿಸಿ ಕೆನಾಲ್ ಪೂರ್ವ ಹಾಗೂ ಪಶ್ಚಿಮ ಭಾಗದ ರಿಪೇರಿ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲರು ಚಾಲನೆ ನೀಡಿದರು.
ಶುಕ್ರವಾರ ರಂದು ಶಾಸಕ ಶ್ರೀಮಂತ ಪಾಟೀಲರು ಐನಾಪುರದಲ್ಲಿ ಕೆನಾಲ್ ಕಾಮಗಾರಿಗೆ ಪೂಜೆ ನೆರವೇರಿಸಿದ ಬಳಿಕ ಮುಖ್ಯ ಅಭಿಯಂತರದ ಕೆ. ರವಿ ಶಾಸಕರಿಗೆ ಮಾಹಿತಿ ನೀಡುವಾಗ ಐನಾಪುರ್ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಂಡು ಸುಮಾರು 12 ವರ್ಷ ಗತಿಸಿದೆ ಕೆನಾಲ್ ನಲ್ಲಿ ಸೋರಿಕೆ ಹೆಚ್ಚಾಗಿದೆ.ಇದರಲ್ಲಿ ನೀರು ಬಸಿದು ಸುಮಾರು ಸಾವಿರಾರು ರೈತರ ಸುಮಾರು ಎರಡು ಲಕ್ಷ ಏಕರೆ ಭೂಮಿಯಲ್ಲಿ ನಿರಂತರವಾಗಿ ನೀರು ನಿಲ್ಲುತ್ತಿದ್ದರಿಂದ ಅಲ್ಲಿಯ ಭೂಮಿಗಳು ಸವಳ- ಜವಳು ಗೊಂಡಿವೆ. ಇಲ್ಲಿಯ ರೈತರ ತೊಂದರೆಯನ್ನು ಶಾಸಕ ಶ್ರೀಮಂತ ಪಾಟೀಲರ ಮುಂದೆ ಇಟ್ಟಾಗ ಕೆನಾಲ್ ಸೋರಿಕೆಗಳು ನಿಲ್ಲಿಸಲು ಈ ಮೊದಲು ಮೂರು ಕೋಟಿ ಮತ್ತೆ 5 ಕೋಟಿ ಹೀಗೆ ಎಂಟು ಕೋಟಿ ರೂ. ಅನುದಾನ ಮಂಜೂರು ಗೊಳಿಸಿದ್ದಾರೆ. ಈ ಕಾಮಗಾರಿ ಪೂರ್ಣಗೊಂಡಿದ್ದ ಬಳಿಕ ಲಕ್ಷಾಂತರ ಎಕರೆ ಭೂಮಿಯಲ್ಲಿ ಮತ್ತೆ ನಿರಂತರ ಬೆಳೆಯಬಹುದು ಎಂದು ಹೇಳಿದರು.
ಶಾಸಕ ಶ್ರೀಮಂತ ಪಾಟೀಲರು ಮಾತನಾಡಿ, ಐನಾಪುರ್ ಏತ ನೀರಾವರಿ ಯೋಜನೆ ಸನ್ 2011 ರಲ್ಲಿ ಪೂರ್ಣಗೊಂಡಿದೆ ಆದರೆ ಕಳಪೆ ಕಾಮಗಾರಿ ಆಗಿದ್ದರಿಂದ ಕೆನಾಲ್ ಗಳು ಒಡೆದು ಹೋಗಿ ಅದರಲ್ಲಿ ನೀರು ಬಸಿದು ಕೆನಾಲ್ ಬಳಿ ಇರುವ ಭೂಮಿಗಳಲ್ಲಿ ನೀರು ಇಂಗುತ್ತಿದೆ ಇದರಿಂದ ಸಾವಿರಾರು ರೈತರ ಭೂಮಿ ಸವಳು- ಜವಳಿಗೊಂಡು ತೊಂದರೆ ಅನುಭವಿಸುತ್ತಿದ್ದರು. ನನ್ನ ಗಮನಕ್ಕೆ ಬಂದಾಗ ಅಧಿಕಾರಿಗಳಿಗೆ ತಿಳಿಹೇಳಿ ಎಂಟು ಕೋಟಿ ರೂ ಅನುದಾನ ಮಂಜೂರು ಗೊಳಿಸಿದ್ದೇನೆ, ಅನುದಾನ ಬಳಿಸಿ ಕೆನಾಲ್ ಕಾಮಗಾರಿ ನೀಟಾಗಿ ಮಾಡಿರಿ ಎಂದು ಸೂಚನೆ ಅಧಿಕಾರಿಗಳಿಗೆ ನೀಡಿದರು, ರೈತರು ಅನೇಕ ದಿನಗಳಿಂದ ತಮ್ಮ ಬೇಡಿಕೆಗಳು ಮಂಡಿಸುತ್ತಿದ್ದರು ಇದು ಒಂದು ಅಂತಿಮ ಹತ್ತಕ್ಕೆ ಬಂದಿದೆ ಎಂದು ಶಾಸಕರು ಹೇಳಿದರು.
ಈ ಸಮಯದಲ್ಲಿ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರದ ಕೆ. ರವಿ ,ಬಸವರಾಜ್ ಗಲಗಲಿ, ಪ್ರಶಾಂತ್ ಪೂತದಾರ,ಡಿ.ಕೆ. ರಾಠೋಡ್, ಬಸವರಾಜ್ ಮುಚ್ಚಂಡಿ,ರೈತ ಮುಖಂಡರಾದ ದಾದಾ ಪಾಟೀಲ್, ಸುಭಾಷ್ ಪಾಟೀಲ್, ರತನ್ ಪಾಟೀಲ್, ನಾನಾಸಾಹೇಬ್ ಅವತಾಡೆ, ನವ್ಲು ಹಾಲಾರೊಟ್ಟಿ, ವಿನೋದ್ ಚಂಡಕಿ, ಅಣಾಸಾಹೇಬ್ ದೂಗುನವರ್, ಪುಟಾಣಿ ಥರಥರೆ, ನಿಂಗಪ್ಪಾ ಚೌಗುಲೆ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.