ಹಳ್ಳೂರ :ಅಂಬೇಡ್ಕರ ಅವರು ಎಲ್ಲರಿಗೂ ಆದರ್ಶಮಯವಾಗಿದ್ದಾರೆ. ಅವರ ಜೀವನವನ್ನೇ ದೇಶದ ಉದ್ದಾರಕ್ಕೆ ಮೂಡುಪಾಗಿಟ್ಟವರು ದೇಶಕ್ಕೆ ಸಂವಿಧಾನವನ್ನು ಬರೆದವರು ಡಾ ಬಿ ಆರ್ ಅಂಬೇಡ್ಕರ ಅವರು ಎಂದು ಗ್ರಾಮ ಆಡಳಿತ ಅಧಿಕಾರಿ ಸಂಜು ಅಗ್ನೇಪ್ಪಗೊಳ ಹೇಳಿದರು.
ಅವರು ಗ್ರಾಮ ಆಡಳಿತ ಅಧಿಕಾರಿ ಕಚೇರಿಯಲ್ಲಿ ಮಹಾ ಮಾನವತಾವಾದಿ ಡಾ ಬಿ ಆರ್ ಅಂಬೇಡ್ಕರ ಅವರ 132 ನೇ ಜಯಂತಿ ಆಚರಣೆಯಲ್ಲಿ ಮಾತನಾಡಿ ಒಂದು ಹೊತ್ತು ಊಟಕ್ಕೆ ಕಮ್ಮಿಯಾದರು ಚಿಂತಿಸಬೇಡಿ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಲೇಖನವನ್ನು ಎಂದಿಗೂ ಕಿತ್ತುಕೊಳ್ಳಬೇಡಿ ಅವರ ಮುಂದಿನ ಭವಿಷ್ಯವನ್ನೇ ಬದಲಿಸುತ್ತದೆಂದು ಹೇಳಿದವರು ಅಂಬೇಡ್ಕರ ಎಂದು ಹೇಳಿದರು.
ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಮಾತನಾಡಿ ಅಂಬೇಡ್ಕರ ಅವರು ಪ್ರಾಮಾಣಿಕ ಪತ್ರಕರ್ತರಾಗಿ ಉತ್ತಮ ಸಮಾಜ ಸೇವೆ ಮಾಡಿದ್ದಾರೆ. ಸಮಾಜಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಪ್ರತಿಯೊಬ್ಬ ಮಹಾ ನಾಯಕರನ್ನು ಸ್ಮರಿಸುವುದು ಉತ್ತಮವಾಗಿದೆ.
ಅಂಬೇಡ್ಕರ ಅವರು ತಮ್ಮ ಜೀವನದಲ್ಲಿ ಸಾಕಷ್ಟು ಕಷ್ಟ ಅನುಭವಿಸಿದರು ಕೂಡಾ ವಿಶ್ವವೇ ಮನ್ನಣೆ ನೀಡುವಂತ ಸಾಧನೆ ಮಾಡಿದ ಅಂಬೇಡ್ಕರ್ ಅವರ ಆದರ್ಶವನ್ನು ಹಾಗೂ ಜೀವನದ ಮಾದರಿಯನ್ನು ಮೈಗೂಡಿಸಿಕೊಂಡು ಮುನ್ನಡೆಯೋಣ. ಎಂದು ಕರೆ ನೀಡಿದರು. ಈ ಸಮಯದಲ್ಲಿ ಬಸಯ್ಯ ಮಠಪತಿ. ರಮೇಶ ಸವದಿ. ಅಡಿವೆಪ್ಪ ಹಡಗೀನಾಳ. ಮಹೇಶ ಮಠಪತಿ. ಹಾಗೂ ಮತ್ತಿತರಿದ್ದರು





