ಏ.15ರಿಂದ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವವು ಪ್ರಾರಂಭ

Share the Post Now

ಹಳ್ಳೂರ :ಸಮೀಪದ ಸೈದಾಪೂರ -ಸಮೀರವಾಡಿ ಜಗದ್ಗುರು ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವವು ದಿ,15 ಶನಿವಾರ ರಂದು ಮುಂಜಾನೆ ಶ್ರೀ ಶಿವಲಿಂಗೇಶ್ವರ ಕರ್ತೃ ಗದ್ದುಗೆಗೆ ಮಹಾಭಿಷೇಕ ವಿಶೇಷ ಪೂಜೆ ನೈವೇದ್ಯ ನಡೆದು ನಂತರ ಮಹಾಪ್ರಸಾದ ವ್ಯವಸ್ಥೆ ಜರುಗುವುದು.

ಸಾಯಂಕಾಲ 5 ಗಂಟೆಗೆ ರಥೋತ್ಸವ ಜರುಗುವುದು.ಅದೇ ದಿನ ರಾತ್ರಿ 10 ಗಂಟೆಗೆ ಶ್ರೀ ಶಿವಲಿಂಗೇಶ್ವರ ನಾಟ್ಯ ಸಂಘ ಸೈದಾಪುರ ಇವರ 19 ನೇ ಕಲಾಕುಸುಮ ಹಳ್ಳಿ ಹುಲಿಯು ಕೊಟ್ಟ ಬೆಳ್ಳಿ ಕಾಲುಂಗರ ನಾಟಕ ವಿರುತ್ತದೆ.

ರವಿವಾರ ಮುಂಜಾನೆ 11 ಗಂಟೆಗೆ ಮಹಾಪ್ರಸಾದ ವ್ಯವಸ್ಥೆ ಪ್ರಾರಂಭವಾಗುವುದು. ಸಾಯಂಕಾಲ 5:30 ಗಂಟೆಗೆ ಶ್ರೀ ಶಿವಲಿಂಗೇಶ್ವರ ಮರು ರಥೋತ್ಸವ ಜರುಗುವುದು. ರಾತ್ರಿ 10 ಗಂಟೆಗೆ ಶ್ರೀ ಶಿವಶರಣ ಡೋಹರ ಕಕ್ಕಯ್ಯ ನಾಟ್ಯ ಸಂಘ ಸೈದಾಪುರ ಅವರು ಅರ್ಪಿಸುವ 19 ನೇ ಕಲಾ ಕುಸುಮ ಹುತ್ತದಲ್ಲಿ ಕೈ ಇಟ್ಟ ಮುತ್ತೈದಿ ಎಂಬ ನಾಟಕವಿರುತ್ತದೆ.

ಆದಕಾರಣ ಸುತ್ತಮುತ್ತಲಿನ ಸದ್ಭಕ್ತರು ಜಾತ್ರೆಗೆ ಬಂದು ದೇವರ ಪ್ರೀತಿಗೆ ಪಾತ್ರರಾಗಬೇಕೆಂದು. ಜಾತ್ರಾ ಮಹೋತ್ಸವ ಕಮಿಟಿ, ಸೇವಕ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!