ದಾವಣಗೆರೆ
ಹರಿಹರ :ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ವತಿಯಿಂದ ರೋವರ್ ಮತ್ತು ರೆಂಜರ್ ಲೀಡರ್ಸ್ ಗಳಿಗೆ ರಾಜ್ಯ ಮಟ್ಟದ ಮೂಲ ತರಬೇತಿ ಶಿಬಿರವನ್ನು ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ಉಪನ್ಯಾಸಕರುಗಳಿಗೆ ಜುಲೈ 24ರಿಂದ 30ವರೆಗೆ ಕೊಂಡಜ್ಜಿ,ಹರಿಹರ ತಾಲೂಕ ದಾವಣಗೆರೆ ಜಿಲ್ಲೆಯಲ್ಲಿ ಈ ತರಬೇತಿ ಶಿಬಿರಕ್ಕೆ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಎಸ್ ಪಿ ಎಮ್ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ,ಸಾಹಿತಿ, ಡಾ. ಸಿ ಪಾವಟೆ ಪ್ರಶಸ್ತಿ ಪುರಸ್ಕೃರಾದ ಡಾ. ವಿಲಾಸ್ ಕಾಂಬಳೆ ಭಾಗವಹಿಸಿದ್ದಾರೆ.
ಈಗಾಗಲೇ NCC ಯಲ್ಲಿ C ಸರ್ಟಿಫಿಕೇಟ್,NSS ನಲ್ಲಿ ವಿಶ್ವವಿದ್ಯಾಲಯ ಮಟ್ಟ, ಜಿಲ್ಲಾ ಮಟ್ಟ, ರಾಜ್ಯ ಮಟ್ಟ, ರಾಷ್ಟ್ರ ಮಟ್ಟದ ತರಬೇತಿ ಶಿಬಿರದಲ್ಲಿ ತಂಡದ ನಾಯಕನಾಗಿ ಭಾಗವಹಿಸಿ, ಬೆಂಗಳೂರಿನಲ್ಲಿ ನಡೆದ ಘನರಾಜ್ಯೋತ್ಸವ ಪತ ಸಂಚಲನದಲ್ಲಿ ಭಾಗವಹಿಸಿ ಕರ್ನಾಟಕ ವಿಶ್ವ ವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. ಇವಾಗ ಕೊಂಡಜ್ಜಿ ಗ್ರಾಮದಲ್ಲಿ ನಡೆದ ಎಳು ದಿನಗಳ ರೋವರ್ ಮತ್ತು ರೆಂಜರ ಲೀಡರ್ಸ್ ಗಳ ರಾಜ್ಯ ಮಟ್ಟದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು,ಎಲ್ಲಾ ಚಟುವಟಿಕೆಗಲ್ಲಿ ಭಾಗವಹಿಸಿ, ತನ್ನ ತಂಡಕ್ಕೆ ವಿಶ್ವ ಜ್ಞಾನಿ ಅಂಬೇಡ್ಕರ್ ಹೆಸರಿಟ್ಟು, ತಂಡದ ನಾಯಕನಾಗಿ ಮುನ್ನಡೆಸಿ, ಎಲ್ಲದರಲ್ಲೂ ಸಕ್ರಿಯವಾಗಿ ಬಾಗಿಯಾಗಿ, ಪ್ರತಿಯೊಂದು ಕಾರ್ಯಕ್ರಮದಲ್ಲಿ ಮೊದಲಿಗನಾಗಿ ತಂಡದ ಘನತೆಯನ್ನು ಹೆಚ್ಚಿಸಿದ್ದಾರೆ.ಇವರ ಕ್ರಿಯಾಶೀಲತೆಯನ್ನು ಕಂಡು ರಾಜ್ಯ ತರಬೇತಿ ಆಯುಕ್ತರಾದ ಶ್ರೀ ನಾಗೇಶ್ ಶಿವಪುರ ಅವರು, ಡಾ. ವಿಲಾಸ್ ಕಾಂಬಳೆ ಅವರ ಕೆಲಸ ಕಾರ್ಯಗಳನ್ನು ಮೆಚ್ಚಿ ಅಭಿನಂದಿಸಿದ್ದಾರೆ.





