ಮುಗಳಖೋಡ: ದಲಿತ ಸಮುದಾಯದ ಮಕ್ಕಳು ವಿದ್ಯೆಯಿಂದ ಯಾರು ವಂಚಿತರಾಗಬಾರದು, ಡಾ. ಅಂಬೇಡ್ಕರ್ ಹೇಳಿದಂತೆ ವಿದ್ಯೆಎಂಬುದು ಹುಲಿ ಹಾಲು ಇದ್ದಂತೆ, ಅದನ್ನು ಕುಡಿದವರು ಘರ್ಜಿಸುತ್ತಾರೆ. ಶಿಕ್ಷಣವನ್ನ ಶಿಕ್ಷಣ ಎಲ್ಲರೂ ಪಡೆದು ಆರ್ಥಿಕವಾಗಿ ಸಬಲ ಆಗಬೇಕು, ಬುದ್ಧನ ನ್ಯಾಯ ಬುದ್ಧನ ನೀತಿ ಬುದ್ಧನ ಧರ್ಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಅಖೀಲ ಕರ್ನಾಟಕ ಡಾಕ್ಟರ್: ಜಿ.ಪರಮೇಶ್ವರ್ ಸೈನ್ಯದ ಜಿಲ್ಲಾಧ್ಯಕ್ಷ ಚಿದಾನಂದ ತಳಕೇರಿ ಸಭೆಯಲ್ಲಿ ಮಾತನಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅ.05 ಶನಿವಾರರಂದು ಅಖಿಲ ಕರ್ನಾಟಕ ಡಾಕ್ಟರ್: ಜಿ.ಪರಮೇಶ್ವರ್ ಯುವ ಸೈನ್ಯ ಬೆಳಗಾವಿ ಹಾಗೂ ದಲಿತ ಯುವ ಸೈನ್ಯ ಮುಗಳಖೋಡ ಇವರ ಆಶ್ರಯದಲ್ಲಿ ಸಚಿವ ಡಾಕ್ಟರ್: ಜಿ ಪರಮೇಶ್ವರ್ ಅವರ 73ನೇ ಹುಟ್ಟುಹಬ್ಬವನ್ನು ಆಚರಿಸಿದರು. ಹಾಗೂ ಸಂಘಟನೆಯ ಜಿಲ್ಲಾಧ್ಯಕ್ಷ ಚಿದಾನಂದ ತಳಕೇರಿ ಅವರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಿದರು.
ಡಾಕ್ಟರ್.ಜಿ ಪರಮೇಶ್ವರ್ ಯುವ ಸೈನ್ಯದ ಜಿಲ್ಲಾ ಗೌರವಾಧ್ಯಕ್ಷರಾಗಿ ರಾಘವೇಂದ್ರ ಶಿಂಪಿ ಆಯ್ಕೆಯಾಗಿದ್ದು, ದಲಿತ ಮುಖಂಡ ಸಚಿನ ಹುಣಶಿಕಟ್ಟಿ, ವರದಿಗಾರ ಕಲ್ಮೇಶ ಸತ್ತಿ ವೇದಿಕೆ ಮೇಲೆ ಇದ್ದರು. ಅಖಿಲ ಕರ್ನಾಟಕ ಡಾ. ಜಿ. ಪರಮೇಶ್ವರ್ ಯುವ ಸೈನ್ಯದ ರಾಯಬಾಗ ಘಟಕದ ಅಧ್ಯಕ್ಷರಾಗಿ ಸಂತೋಷ ಕಾಂಬಳೆ, ಕಾಗವಾಡ ತಾಲೂಕ ಘಟಕದ ಅಧ್ಯಕ್ಷರಾಗಿ ವೆಂಕಟೇಶ ಕಾಂಬಳೆ, ಅಥಣಿ ತಾಲೂಕ ಘಟಕದ ಅಧ್ಯಕ್ಷರಾಗಿ ಗಜಾನಂದ ಅಜೇಟರಾವ್ ಆಯ್ಕೆಯಾದರು. ಕುಡಚಿ ಹೋಬಳಿ ಘಟಕದ ಅಧ್ಯಕ್ಷ ಕುಮಾರ ಕಾಂಬಳೆ, ಮುಗುಳಖೋಡ ಪಟ್ಟಣದ ಅಧ್ಯಕ್ಷರಾಗಿ ರಾಜು ಹೆಗಡೆ ಆಯ್ಕೆಯಾದರು.
ಈ ಸಂದರ್ಭದಲ್ಲಿ ರಾಜು ಕಾಂಬಳೆ, ಪಾಂಡು ಸಬಕಾಳೆ, ಅಮೃತ ಮಾನೆ, ಸಿದ್ಧಾರೂಢ ಕಾಂಬಳೆ, ಪ್ರಶಾಂತ ಮಾದರ, ಕಿರಣ ಅಜೆಟರಾವ್, ತುಕ್ಕರಾಮ ಭಜಂತ್ರಿ, ಪಿಂಟು ಪಾತ್ರೂಟ, ಸಂಜಯ ಕಾಂಬಳೆ, ವಸಂತ ಚೌಡಕಿ, ಮಹಾಂತೇಶ ಯಾದವಾಡ, ಲಕ್ಷ್ಮಣ ಕುರಾಡೆ ಇತರರು ಇದ್ದರು. ರಾಘವೇಂದ್ರ ಶಿಂಪಿ ಸ್ವಾಗತಿಸಿದರು. ಸಚಿನ ಹುಣಸಿಕಟ್ಟಿ ನಿರೂಪಿಸಿದರು. ಸಂತೋಷ ಕಾಂಬಳೆ ವಂದಿಸಿದರು
ವರದಿ: ಸಂತೋಷ ಮುಗಳಿ





