ಮುಗಳಖೋಡ ಪಿಕೆಪಿಎಸ್ ಬ್ಯಾಂಕ್ ಚುನಾವಣೆ ಅಧ್ಯಕ್ಷರಾಗಿ ಶಿವಾನಂದ ಗೋಕಾಕ, ಉಪಾಧ್ಯಕ್ಷರಾಗಿ ಹನುಮಸಾಬ ನಾಯಿಕ ಆಯ್ಕೆ: ಚುನಾವಣೆ ಅಧಿಕಾರಿ ಎಸ್.ಬಿ.ಚಿನಗುಂಡಿ;

Share the Post Now

ವರದಿ: ಸಂತೋಷ ಮುಗಳಿ


ಸಂಘದಿಂದ ಬರುವಂತಹ ಸೌಲಭ್ಯಗಳನ್ನು ರೈತರಿಗೆ ಒದಗಿಸುವಂತಹ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ: ನೂತನ ಅಧ್ಯಕ್ಷ ಶಿವಾನಂದ ಗೋಕಾಕ;

ಮುಗಳಖೋಡ: ತಾಲೂಕಿನ ಮುಗಳಖೋಡ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಐದು ವರ್ಷಗಳ ಅವಧಿಯ ನಿರ್ದೇಶಕರ ಚುನಾವಣೆಯು ಈ ಹಿಂದೆ ಜುಲೈ 23ರಂದು ಜರುಗಿತ್ತು, ಜುಲೈ .05 ಶನಿವಾರ ಜರುಗಿದ ಆಡಳಿತ ಮಂಡಳಿಯ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆಯಲ್ಲಿ ಶಿವಾನಂದ ಮಾರುತಿ ಗೋಕಾಕ ಅಧ್ಯಕ್ಷರಾಗಿ ಆಯ್ಕೆಯಾದರೆ, ಹನುಮಸಾಬ ಅಣ್ಣಾಸಾಹೇಬ ನಾಯಿಕ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಬಿ.ಚಿನಗುಂಡಿ ಸುದ್ದಿಗಾರರಿಗೆ ತಿಳಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಶಿವಾನಂದ ಮಾರುತಿ ಗೋಕಾಕ ಹಾಗೂ ಚನ್ನಪ್ಪ ಸಂಗಪ್ಪ ಕೊಪ್ಪದ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಚನ್ನಪ್ಪ ಭೀಮಪ್ಪ ಯಡವಣ್ಣವರ ಹಾಗೂ ಹನುಮಸಾಹೇಬ ಅಣ್ಣಾಸಾಹೇಬ ನಾಯಿಕ ನಾಮಪತ್ರಗಳನ್ನು ಸಲ್ಲಿಸಿದ್ದರು.

ಶಿವಾನಂದ ಗೋಕಾಕ ಹಾಗೂ ಹನುಸಾಹೇಬ ನಾಯಿಕ ತಲಾ 8 ಮತಗಳನ್ನು ಪಡೆದು ಸಂಘದ ನೂತನ ಅಧ್ಯಕ್ಷ – ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.. ಚನ್ನಪ್ಪ ಕೊಪ್ಪದ ಹಾಗೂ ಚನ್ನಪ್ಪ ಯಡವಣ್ಣವರ ತಲಾ ನಾಲ್ಕು ಮತಗಳನ್ನು ಪಡೆದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಪರ್ಧೆಯಿಂದ ಪರಾಜಿತರಾದರು.

ಈ ಸಂದರ್ಭದಲ್ಲಿ ಚುನಾಯಿತ ಆಡಳಿತ ಮಂಡಳಿಯ ನಿರ್ದೇಶಕರಾದ ಕರೇಪ್ಪ ಮಂಟೂರ, ಲಕ್ಷ್ಮಣ ಗೋಕಾಕ, ಸುರೇಶ ಜಂಬಗಿ, ಶ್ರೀಮತಿ ಮಲ್ಲವ್ವ ಖೇತಗೌಡ, ಶ್ರೀಮತಿ ಲಕ್ಕವ್ವ ಶೇಗುಣಸಿ, ರಾಮಚಂದ್ರ ಕುರಾಡೆ, ಭೀಮಪ್ಪ ತಳವಾರ ಹಾಗೂ ಲಕ್ಷ್ಮಣ ಮುನ್ನಾಳ ಮತ ಚಲಾಯಿಸಿದರು. ಚುನಾವಣಾಧಿಕಾರಿ ಎಸ್.ಬಿ.ಚಿನಗುಂಡಿ, ಸಹಾಯಕ ಚುನಾವಣಾಧಿಕಾರಿ ನಂದಿಗೌಡ ಗಿರಿಗೌಡರ, ಗಣಪತಿ ಕುರಾಡೆ, ಮಹಾದೇವ ಉಗಾರೆ, ಗೋಪಾಲ ಗೋಕಾಕ ಇತರರು ಚುನಾವಣೆಯ ಕಾರ್ಯನಿರ್ವಹಿಸಿದರು.

ಜನರ ಪ್ರೀತಿ, ವಿಶ್ವಾಸ ಗಳಿಸಿದವರು ಚುನಾವಣೆಯಲ್ಲಿ ಗೆಲುವು ಪಡೆದಿದ್ದಾರೆ. ನಾನು ಕಿಂಗ್ ಅಲ್ಲ..! ಕಿಂಗ್ ಮೇಕರ್ ಅಲ್ಲವೇ ಅಲ್ಲ…! ನಾನೂ ಜನರ ಸೇವಕ ಮಾತ್ರ, ಪಟ್ಟಣದಲ್ಲಿ ನಮ್ಮಿಬ್ಬರನ್ನು ಅಗಲಿಸಲು(ಗೋಕಾಕ- ಕುಲಿಗೋಡ) ಹಿತಾಸಕ್ತಿಗಳು ಶತಾಯಗತಾಯ ಪ್ರಯತ್ನಗಳು ನಡೆದಿದ್ದವು, ಆದರೆ ನಾವಿಬ್ಬರೂ ಒಂದಾದರೇ ಪಟ್ಟಣದಲ್ಲಿ ಬದಲಾವಣೆ ಏನಾಗುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದೇವೇ ಡಾ : ಸಿ.ಬಿ.ಕುಲಿಗೋಡ.

ಈ ಹಿಂದೆ ಸುಮಾರು ವರ್ಷಗಳ ಕಾಲ ನಮ್ಮ ತಂದೆಯವರು ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ರೈತಪರ ಯೋಜನೆಗಳನ್ನ ತಂದು ರೈತರಿಗೆ ಅನುಕೂಲವಾಗುವಂತೆ ಕೆಲಸ ಮಾಡಿದ್ದರು. ನಮ್ಮ ತಂದೆಯವರ ಜನಪರ ಕೆಲಸದಿಂದ, ಪಟ್ಟಣದ ಎಲ್ಲ ಜನರ ಆಶೀರ್ವಾದದಿಂದ ನಾನು ಚುನಾಯಿತನಾದೆ. ಎಲ್ಲ ಮತದಾರರ ಹಾಗೂ ನಿರ್ದೇಶಕರ ಆಶೀರ್ವಾದದಿಂದ ಸಂಘದ ನೂತನ ಅಧ್ಯಕ್ಷನಾಗಿದ್ದೇನೆ. ಮುಂಬರುವ ದಿನಗಳಲ್ಲಿ ರೈತರ ಒಡನಾಡಿಯಾಗಿ, ಸಂಘದಿಂದ ಬರುವಂತಹ ಸೌಲಭ್ಯಗಳನ್ನು ರೈತರಿಗೆ ಒದಗಿಸುವಂತಹ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಶಿವಾನಂದ ಗೋಕಾಕ ಹೇಳಿದರು.

ಈ ಸಂದರ್ಭದಲ್ಲಿ ಹಿರಿಯರಾದ ಮಾರುತಿ ಗೋಕಾಕ, ಜಿ.ಪಂ.ಮಾಜಿ ಸದಸ್ಯ ಡಾ. ಸಿ.ಬಿ.ಕುಲಿಗೋಡ, ಲಕ್ಷ್ಮಣ ಗೋಕಾಕ, ಮಹಾವೀರ ಕುರಾಡೆ, ಚಂದ್ರು ನಾಯಿಕ, ಸಂಗಪ್ಪ ಯತ್ತಿನಮನಿ, ಮಾರುತಿ ಭಜಂತ್ರಿ, ಮಾರುತಿ ಹಿಪ್ಪರಗಿ, ಪರಪ್ಪ ಕುಲಿಗೋಡ ಇತರರು ಇದ್ದರು. ಹಾರೂಗೇರಿ ಠಾಣೆಯ ಸಿಪಿಐ ರವಿಚಂದ್ರನ್ ಬಡಪಕೀರಪ್ಪನವರ, ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ, ಹೆಚ್ಚುವರಿ ಪಿಎಸ್ಐ ಚಾಂದಬಿ ಗಂಗಾವತಿ ಹಾಗೂ ಪೋಲಿಸ್ ಸಿಬ್ಬಂದಗಳೊಂದಿಗೆ ಬೀಗಿ ಬಂದೋಬಸ್ತ್ ಕಲ್ಪಿಸಿದ್ದರು.

ಪಟ್ಟಣದ ಶಕ್ತಿಪೀಠ ಶ್ರೀ ಯಲ್ಲಾಲಿಂಗ ಮಹಾರಾಜರ ಕರ್ತೃ ಗದ್ದುಗೆಯ ದರ್ಶನವನ್ನು ಪಡೆದು ಅಧ್ಯಕ್ಷ – ಉಪಾಧ್ಯಕ್ಷರು ಅಭಿಮಾನಿಗಳ ಹಾಗೂ ಕಾರ್ಯಕರ್ತರೊಂದಿಗೆ ಗೆಲುವಿನ ಉತ್ಸವದಲ್ಲಿ ಬಾಗಿಯಾದರು. ಕಾರ್ಯಕರ್ತರು ಪಟಾಕಿ ಸಿಡಿಸಿ ಗುಲಾಲ್ ಎರಚಿ ಸಂಭ್ರಮಿಸಿದರು.

ಫೋಟೋ ಶೀರ್ಷಿಕೆ
ಮುಗಳಖೋಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಐದು ವರ್ಷ ಅವಧಿಯ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆಯಲ್ಲಿ ಶಿವಾನಂದ ಗೋಕಾಕ ಅಧ್ಯಕ್ಷರಾಗಿ ಆಯ್ಕೆಯಾದರೆ ಹನುಮಾಸಾಬ ನಾಯಿಕ ಉಪಾಧ್ಯಕ್ಷರಾಗಿ ಆಯ್ಕೆಯಾದರು.

Leave a Comment

Your email address will not be published. Required fields are marked *

error: Content is protected !!