ವರದಿ :ಸೀದರಾಯ್ ಮೋರೆ. ಕಾಗವಾಡ
ಕಾಗವಾಡ ಮತ ಕ್ಷೇತ್ರದ ಎಲ್ಲ ತಾಲೂಕ ಮಟ್ಟದ ಅಧಿಕಾರಿಗಳು ಗ್ರಾಮಮಟ್ಟದ ಗ್ರಾಮ ಅಭಿವೃದ್ಧಿ ಅಧಿಕಾರಿ,, ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಎಲ್ಲಾ ಸರ್ಕಾರಿ ಅಧಿಕಾರಿಗಳು ಗ್ರಾಮಮಟ್ಟದ ಎಲ್ಲ ಜನರ ಸಮಸ್ಯೆಗಳಿಗೆ ಸ್ಪಂದಿಸಿರಿ, ಈ ವರ್ಷ ಸಮರ್ಪಕವಾಗಿ ಮಳೆ ಬಾರದೆ
ಕಾರಣ ರೈತರು ಸಮಸ್ಯೆಗಳಲ್ಲಿ ಸಿಲುಕಿದ್ದಾರೆ, ಅವರಿಗೆ ತೊಂದರೆ ನೀಡಿಬೇಡಿ ಎಂದು ಕಾಗವಾಡ ಶಾಸಕ ರಾಜು ಕಾಗೆ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ರಂದು ಕಾಗವಾಡದ ಸರ್ಕಾರಿ ವಿಶ್ರಾಂತಿ ಗ್ರಹದಲ್ಲಿ ತಾಲೂಕ ಮಟ್ಟದ ಅಧಿಕಾರಿಗಳ ಕೆ ಡಿ ಪಿ ಸಭೆ ಹಮ್ಮಿಕೊಂಡಿದ್ದರು. ಸಭೆಯಲ್ಲಿ ಎಲ್ಲ ಅಧಿಕಾರಿಗಳಿಗೆ ಸೂಚನೆಗಳು ನೀಡಿದರು.
ಕಾಗವಾಡ ಮತಕ್ಷೇತ್ರದಲ್ಲಿ ಮುಂಗಾರು ಮಳೆ ಬಾರದೆ ಇದ್ದಿದ್ದರಿಂದ ಬಿತ್ತನೆ ಆಗಲಿಲ್ಲ ಹಿಂಗಾರಿ ಬೆಳೆಗಾಗಿ ಜನರು ಕಾಯುತ್ತಿದ್ದಾರೆ. ಇಂಥ ಸಮಸ್ಯೆಗಳಲ್ಲಿದ್ದಾಗ ವಿಧಾನಸಭೆಯಲ್ಲಿ ಕಾಗವಾಡ ತಾಲೂಕ ಬರ ತಾಲೂಕ ಎಂದು ಘೋಷಿಸಿರಿ ಎಂಬ ಬೇಡಿಕೆ ಇಟ್ಟಿದ್ದೇನೆ, ಇದನ್ನು ಗಮನಿಸಿ ಸರ್ಕಾರದ ಆದೇಶದಂತೆ ನಿನ್ನೆ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ರಿತೇಶ್ ಪಾಟೀಲ್ ಗ್ರಾಮಗಳಿಗೆ ಭೇಟಿ ನೀಡಿ ಸರ್ಕಾರಕ್ಕೆ ಅಹವಾಲ ಸಲ್ಲಿಸಲಿದ್ದಾರೆ, ನಾಳೆ ಮತ್ತು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕಾಗವಾಡ ಬರ ತಾಲೂಕ ಎಂದು ಘೋಷಣೆ ಮಾಡಲು ಒತ್ತಾಯಿಸಿಲಿದ್ದೇನೆ,
ಈ ಕಾರಣ ತಾಲೂಕಿನ ಎಲ್ಲಾ ಅಧಿಕಾರಿಗಳು ಗ್ರಾಮಮಟ್ಟದ ಸಿಬ್ಬಂದಿಗಳು ಸಹಕಾರ ನೀಡಿ ಸಾಮಾನ್ಯ ಜನರಿಗೆ ತೊಂದರೆ ನೀಡಬೇಡಿ ಎಂದು ಹೇಳಿದರು.
ಒಂದು ವೇಳೆ ನನ್ನ ಗಮನಕ್ಕೆ ತೊಂದರೆ ನೀಡಿದ ಬಗ್ಗೆ ಮಾಹಿತಿ ಬಂದರೆ ನಾನು ಸುಮ್ಮನೆ ಬಿಡುವುದಿಲ್ಲ, ಎಂಬ ಎಚ್ಚರಿಕೆ ನೀಡಿದರು.
ಕಾಗವಾಡ ತಾಲೂಕಿನ ಗ್ರಾಮಗಳಲ್ಲಿ ಮಹಾರಾಷ್ಟ್ರದ ಗ್ರಾಮಗಳಿಂದ ಅನಧಿಕೂರುತವಾಗಿ ಶರೆ ತಂದು ಮಾರಾಟ ಮಾಡುತ್ತಿದ್ದಾರೆ, ಈ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಇದನ್ನು ಸದ್ಯಕ್ಕೆ ಸರಿಪಡಿಸದೆ ಹೋದರೆ ಖಂಡಿತವಾಗಿ ಅಂತಹ ಅಧಿಕಾರಗಳ ಮೇಲೆ ಕ್ರಮ ಜರುಗಿಸುತ್ತೇನೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಶಾಸಕರು ಎಚ್ಚರಿಕೆ ನೀಡಿದರು.
ಕಾಗವಾಡ ತಾಲೂಕಿನ ಎಲ್ಲಾ ಅಧಿಕಾರಿಗಳು ಹಾಗೂ ಗ್ರಾಮಮಟ್ಟದ ಸಿಬ್ಬಂದಿ ವರ್ಗ ಯಾವ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೀರಿ ಅಲ್ಲಿಗೆ ವಾಸ್ತವವಾಗಬೇಕು, ಎಂದು ಕಟ್ಟುನಿಟ್ಟಿನ ಎಚ್ಚರಿಕೆ ಸಭೆಯಲ್ಲಿ ನೀಡಿದರು.
ಕಾಗವಾಡ ತಹಸಿಲ್ದಾರ್ ರಾಜೇಶ್ ಬುರ್ಲಿ ಇವರ ನೇತೃತ್ವದಲ್ಲಿ ಎಲ್ಲಾ ಅಧಿಕಾರಿಗಳ ಸಭೆ ಜರುಗಿತು ಸಭೆಯಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಉತ್ತರ ನೀಡಿದರು.
ತಾಲೂಕ ಪಂಚಾಯಿತಿ ಅಧಿಕಾರಿ ಡಾಕ್ಟರ್ ಸುರೇಶ್ ಕದ್ದು, ಸಿ ಡಿ ಪಿ ಓ ಸಂಜೀವ್ ಕುಮಾರ್ ಸದಲಗೆ, ಬಿಇಒ ಎಂ ಆರ್ ಮುಂಜೆ, ಪಂಚಾಯಿತಿ ರಾಜ್ಯ ಇಲಾಖೆ ಅಧಿಕಾರಿ ವೀರಣ್ಣ ವಾಲಿ, ನೀರಾವರಿ ಇಲಾಖೆ ಅಧಿಕಾರಿ ಕೆ ರವಿ ,ಪ್ರವೀಣ್ ಹುಣಸಿಕಟ್ಟಿ, ಜಿಲ್ಲಾ ಪಂಚಾಯಿತಿಯ ಮುಖ್ಯ ಅಧಿಕಾರಿ ಜಯಾನಂದ ಹಿರೇಮಠ್, ಉಗಾರ ಪುರಸಭೆ ಅಧಿಕಾರಿ ಸುನಿಲ್ ಬಬಲಾದಿ, ಐನಾಪುರ್ ಪಟ್ಟಣ ಪಂಚಾಯಿತಿ ಅಧಿಕಾರಿ ಮಹಾಂತೇಶ್ ಕೊಲ್ಲಾಪುರ, ಶೇಡಬಾಳ ಪಟ್ಟಣ ಪಂಚಾಯಿತಿ ಅಧಿಕಾರಿ ಆರ್ ಬಿ ಪೂಜೆರೆ, ಕಾಗವಾಡ ಪಟ್ಟಣ ಪಂಚಾಯಿತಿ ಅಧಿಕಾರಿ ಕೆ ,ಕೆ.ಗಾವಡೆ, ಮಧ್ಯಾಹ್ನ ಆಹಾರ ಯೋಜನೆ ಅಧಿಕಾರಿ ಕೆ. ಟಿ. ಕಾಂಬಳೆ, ಉಪತಹಸಿಲ್ದಾರ್ ಅನ್ನಾ ಸಾಹೇಬ್ ಕೋರೆ, ಗೋಪಾಲ್ ಮಾಳಿ ಸೇರಿದಂತೆ ಇನ್ನಿತರ ಇಲಾಖೆ ಅಧಿಕಾರಿಗಳು ಸಿಬ್ಬಂದಿ ವರ್ಗ ಪಾಲಗೊಂಡಿದ್ದರು.