ಅಲಖನೂರು: ಶಿಕ್ಷಕನಿಗೆ ಬೀಳ್ಕೊಡುಗೆ
ಬೆಳಗಾವಿ.ಮುಗಳಖೋಡ: ಸಮೀಪದ ಅಲಖನೂರಿನ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ.07 ಸೋಮವಾರದಂದು 17 ವರ್ಷ ಸೇವೆ ಸಲ್ಲಿಸಿದ ಶಿಕ್ಷಕ ಯಲ್ಲಪ್ಪ ವಿ ಮಾದರ ಅವರಿಗೆ ವರ್ಗಾವಣೆಯಾದ ಪ್ರಯುಕ್ತ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಮೂಡಲಗಿಯ ಆರ್ ಡಿ ಎಸ್ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಮತ್ತು ಸಾಹಿತಿ ಟಿ ಎಸ್ ವಂಟಗೂಡಿ ಮುಖ್ಯ ಅತಿಥಿಯಾಗಿ ಮಾತನಾಡಿ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಈ ದೇಶಕ್ಕೆ ಕೃಷಿಕ, ಸೈನಿಕ ಹಾಗೂ ಶಿಕ್ಷಕರ ಪಾತ್ರ ಬಹಳ ಮುಖ್ಯವಾದದ್ದು. ಶಿಕ್ಷಕರನ್ನು ಗೌರವಿಸುವುದೆಂದರೆ ದೇವರನ್ನು ಪೂಜಿಸಿದಂತೆ 17 ವರ್ಷದ ವರೆಗೆ ಶಿಕ್ಷಕ ಸೇವೆ ಸಲ್ಲಿಸಿದ ಯಲ್ಲಪ್ಪ ಮಾದರ ಅವರ ಸೇವೆ ಶ್ಲಾಘನೀಯ ಅವರಿಗೆ ದೇವರು ಆಯುಷ್ಯ ಆರೋಗ್ಯವನ್ನ ಕೊಟ್ಟು ಕಾಪಾಡಲಿ ಎಂದು ಸಾಹಿತಿ ಟಿ ಎಸ್ ವಂಟಗೂಡಿ ಶುಭ ಹಾರೈಸಿದರು .

ಮಾಜಿ ಸೈನಿಕ ಗೋಪಾಲ ಪೂಜೇರಿ ಹಾಗೂ ಶಿಕ್ಷಕ ಭರಮು ಪೂಜೇರಿ ಮಾತನಾಡಿ ಗುರುವಿಗಿಂತ ಅಧಿಕರಿಲ್ಲ. , ಗುರುಸೇವೆ ಪವಿತ್ರವಾದದ್ದು. ಪ್ರತಿಯೊಬ್ಬರೂ ಗುರುವಿನ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಆನೆಯಿಂದ ಪುಷ್ಪಮಾಲೆ ಅರ್ಪಿಸಿರುವುದು ಎಲ್ಲರ ಕಣ್ಮನ ಸೆಳೆಯಿತು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ಎಂ ಪಿ ಮುಲ್ಲಾ ಎಂ ಎಚ್ ಗೋಳಸಂಗಿ ಎಸ್.ಡಿ.ಎಂ.ಸಿ ಅಧ್ಯಕ್ಷ ಸಿದ್ದರಾಮ ಹಸರೆ, ಉಪಾಧ್ಯಕ್ಷ ಸಂಜು ಮಾಂಗ, ಸದಸ್ಯರಾದ ಕರೆಪ್ಪ ಶಿರಡೋಣಿ, ಬಸು ಮಾಂಗ, ಮಹಾದೇವಿ ಸಂಕ್ರಟ್ಟಿ, ಕವಿತಾ ಹೂಗಾರ ಕರೆಪ್ಪ ಬೇವನೂರು, ಪರಶುರಾಮ ಕಾಂಬಳೆ, ಭೂದಾನಿಗಳಾದ ಅಪ್ಪಣ್ಣ ಹಸರೆ ಹಾಗೂ ಕರೆಪ್ಪ ಮಾಂಗ ಉಪಸ್ಥಿತರಿದ್ದರು. ಮಹಾಂತೇಶ ಅ ಗುಡೋಡಗಿ ನಿರೂಪಿಸಿದರು. ಅಪ್ಪಾಸಾಬ ಕಿರಣಗಿ ಸ್ವಾಗತಿಸಿದರು , ಸುನಿತಾ ದೇವಾನಗೋಳ ಗುರುಮಾತೆ ವಂದಿಸಿದರು.
ವರದಿ: ಸಂತೋಷ ಮುಗಳಿ





