ಹಳ್ಳೂರ :ಎಲ್ಲರೂ ಕೂಡಿಕೊಂಡು ಜಾತ್ರೆ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದಲ್ಲಿ ನಡೆಯುವದರಿಂದ ಸಾಮಾಜಿಕ ಸಾಮರಸ್ಯ ಬೆಳೆದು ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಹೇಳಿದರು.
ಅವರು ಹಳ್ಳೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ನಡೆಯುವ ದುರ್ಗಾದೇವಿ ಜಾತ್ರೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ನಾಟಕದ ಉದ್ಘಾಟನೆ ಮಾಡಿ ಮಾತನಾಡಿ ಜಾತ್ರೆ ಹಬ್ಬ ಹರಿದಿನಗಳು ಮನುಷ್ಯನಿಗೆ ಸಂಸಾರಿಕ ಜೀವನದಲ್ಲಿ ನೆಮ್ಮದಿ ಕಾಣುವಂತೆ ಮಾಡುತ್ತದೆ ಇಂದು ಮನುಷ್ಯ ಯಾತ್ರಿಕವಾಗಿ ಮುಂದುವರೆದರು ಬಹಳ ಒತ್ತಡದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲ ಸಮಾಜದ ಬಾಂದವರ ಜೊತೆ ಬೆರೆತು ಎಲ್ಲಾ ಸ್ಥಾನ ಮಾನಗಳನ್ನು ಪಡೆದುಕೊಳ್ಳಬೇಕು. ವ್ಯಸನಕ್ಕೆ ಸಿಲುಕಿ ಜೀವನ ಹಾಳು ಮಾಡಿಕೊಳ್ಳಬೇಡಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿ ಮೇಧಾವಿಗಳನ್ನಾಗಿ ಮಾಡಿರೆಂದು ಹೇಳಿದರು. ಕಾರ್ಯದರ್ಶಿ ಗೋವಿಂದ ಮಾದರ ಮಾತನಾಡಿ ದುರ್ಗಾ ದೇವಿ ಜಾತ್ರೆ ಮಾಡಲು ಎಲ್ಲಾ ಸಮಾಜ ಬಾಂದವರ ಸಹಕಾರ ಹಾಗೂ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಜಾತ್ರೆಯು ವಿಜೃಂಭಣೆಯಿಂದ ಜರುಗಿತು. ಸಮಾಜದಲ್ಲಿ ಎಲ್ಲರೂ ಧಾರ್ಮಿಕ ಕಾರ್ಯಗಳಲ್ಲಿ ಬಾಗವಹಿಸಿ ಸಮಾಜಕ್ಕೆ ಉಪಯೋಗವಾಗುವಂತ ಕಾರ್ಯ ಮಾಡಬೇಕೆಂದು ಹೇಳಿದರು. ವಿಠ್ಠಲ ಕಲ್ಲೋಳಿ ಮಾತನಾಡಿ ದೈವ ಭಕ್ತಿ ದೇವರ ಸಾಮಿಪ್ಯ,ಮನುಷ್ಯರನ್ನು ಮಹಾ ಮಾನವರನ್ನಾಗಿ ಮಾಡುತ್ತದೆಂದು ಹೇಳಿದರು.
ಈ ಸಮಯದಲ್ಲಿ ದೇವಸ್ಥಾನದ ಅರ್ಚಕರಾದ ಪಕೀರ ದೊಡಮನಿ. ಸೂರಪ್ಪ ಮ್ಯಾಗಾಡಿ.ಇಶ್ವರ ವೆಂಕಟಾಪುರ. ಸಂತಪ್ಪ ದೊಡಮನಿ. ಸುಭಾಸ ಬಾಳವ್ವಗೋಳ. ರಾಮ ದೊಡಮನಿ. ಸಂಗಪ್ಪ ಹರಿಜನ. ಬರಮಪ್ಪ ತೆಳಗಡೆ. ಮುತ್ತು ಕಲ್ಲೋಳ್ಳಿ. ಸಂತಪ್ಪ ದೊಡಮನಿ.ಶಾನೂರ ದೊಡಪರಸಪ್ಪಗೋಳ. ಶಂಕರ ಕಲ್ಲೋಳಿ.ಕಮಲ ಕಲ್ಲೋಳಿ. ಬಸಪ್ಪ ಮ್ಯಾಗಡಿ ಸೇರಿದಂತೆ ಅನೇಕರಿದ್ದರು.